ನ್ಯೂ ಯಾರ್ಕ್ (/nuːˈjɔrk/ ) ಅಮೇರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗದಲ್ಲಿನ ಒಂದು ರಾಜ್ಯ. ಈ ದೇಶದ ಮೂರನೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಈ ರಾಜ್ಯದ ದಕ್ಷಿಣಕ್ಕೆ ನ್ಯೂ ಜರ್ಸಿ ಮತ್ತು ಪೆನ್ಸಿಲ್ವೇನಿಯ, ಪೂರ್ವಕ್ಕೆ ಕನೆಕ್ಟಿಕಟ್, ಮ್ಯಾಸಚೂಸೆಟ್ಸ್ ಮತ್ತು ವೆರ್ಮಾಂಟ್, ಹಾಗೂ ಉತ್ತರಕ್ಕೆ ಕೆನಡಾ ಇವೆ. ಆಲ್ಬನಿ ರಾಜಧಾನಿಯಾಗಿರುವ ಈ ರಾಜ್ಯದ ಅತ್ಯಂತ ದೊಡ್ಡ ನಗರ ನ್ಯೂ ಯಾರ್ಕ್ ನಗರ.